ವಿದ್ಯಾರ್ಥಿ ಮಿತ್ರರೇ, ಪೋಷಕರೆ,
ಪರೀಕ್ಷೆ ಬಂತೆಂದರೆ ಭಯ ಪಡೋದೇಕೆ…? ಕೊ0ಚ ಕ್ರಮಬದ್ಧವಾಗಿ ಸಿದ್ಧವಾಗಿಬಿಟ್ಟರೆ ಪರೀಕ್ಷೆ ಅಘಾತ ಎಂಬ ಭಯಕ್ಕಿಂತಲೂ ಅದೊಂದು ಅವಕಾಶ ಎಂಬ ಆತ್ಮವಿಶ್ವಾಸ ಮೂಡುವುದು ಖಂಡಿತ ಸಾಧ್ಯ.
ಹಾಗಿದ್ದರೆ, ಪರೀಕ್ಷೆ ಅನ್ನೋದು ಅವಕಾಶ ಹೇಗಾಗುತ್ತೆ..? ನಾವು ಪರೀಕ್ಷಾ ಸಿದ್ಧತೆಯಲ್ಲಿ ಕೊ0ಚ ಕ್ರಮಬದ್ಧ ಸಿದ್ಧತೆಯನ್ನು ನಡೆಸಿದರೆ ಪರೀಕ್ಷೆಯೆ0ಬ ಅವಕಾಶದಲ್ಲಿ ಗೆದ್ದು ಬೀಗಬಹುದು. ಯಾಕೆಂದರೆ ಪರೀಕ್ಷೆ ಎಂಬುದು ನಮ್ಮನ್ನು ಮೇಲ್ಲಕ್ಕೇರಿಸುವ ಮೆಟ್ಟಿಲಾಗಿರುತ್ತದೆ.
ಹಾಗಿದ್ದರೆ ಕ್ರಮಬದ್ಧ ಸಿದ್ಧತೆ ಹೇಗಿರಬೇಕು…?
ಸಿದ್ಧತೆಗೂ ಮೊದಲು ಇಲ್ಲಿ ನಾವು Mindset ಬಗೆಗೆ ಚರ್ಚಿಸೋಣ…..
Calm mind vs mess mind
ಪರೀಕ್ಷೆ ಎ0ದೊಡನೆ ಎಲ್ಲಿ fail ಆಗಿಬಿಡುತ್ತೀವೋ ಎ0ಬ ಭಯದಿ0ದ ಮನಸ್ಸನ್ನು ಆತಂಕದ ಗೂಡಾಗಲು ಬಿಡಬಾರದು. ಭಯಬಿಟ್ಟು ಪರೀಕ್ಷೆಯನ್ನು ಎದುರಿಸಲು ನಮ್ಮ ಸಿದ್ಧತೆ ಏನು? Analyse ಮಾಡಿಕೊಳ್ಳಬೇಕು, ಹೇಗೆ ಈ ಪರೀಕ್ಷೆಯನ್ನು ಯಶಸ್ವಿಯಾಗಿ ಗೆಲ್ಲಬಹುದು ಎ0ಬುದನ್ನು ಯೋಜಿಸಬೇಕು.
So, ನಿಮ್ಮ Mindset ಯಾವಾಗಲೂ OK, lets look at my weakness & strength ಅನ್ನೋತರ ಇರಬೇಕು weakness ನ್ನ strengthಆಗಿ convert ಹೇಗೆ ಮಾಡಬಹುದು ಅನ್ನೋದರ game plan ಮಾಡಿಕೊಳ್ಳಬೇಕು.
ಯಾವಾಗ ಪರೀಕ್ಷೆ ಅಂದ್ರೆ ಭಯವಾಗುತ್ತೆ ಗೊತ್ತಾ…?
ಪರೀಕ್ಷೆ ಸಿದ್ಧವಾಗುವ ಬಗೆಗೆ ಹೇಗೆ ಎಂದು ವಿವರವಾಗಿ ಚರ್ಚಿಸುವ ಸಮಯವನ್ನು ನಾವೀಗ ಮೀರಿದ್ದೇವೆ. ಹಾಗಾಗಿ, ನಾನಿಲ್ಲಿ ಪರೀಕ್ಷೆಯ ಹತ್ತಿರವಿರುವ ಸಮಯದಲ್ಲಿ ನೀವು ಮಾಡಬೇಕಿರುವುದೇನು ಎಂಬುದರ ಬಗೆಗೆ ಚರ್ಚಿಸೋಣ.
Cramming to Mapping
ಅಂದರೆ, ಪರೀಕ್ಷೆಯ ಅಗಾಧವಾದ syllabus ಕಂಡು ಎಲ್ಲಿಂದ ಶುರುಮಾಡಬೇಕು ಎಂದು ತಿಳಿಯದೇ ಆತಂಕಕ್ಕೊಳಗಾಗುವ ಬದಲು ನಿಮ್ಮ syllabus ಜೊತೆಗೆ ನಿಮ್ಮ ಕಲಿಕೆಯನ್ನು audit ಮಾಡಿ.
ನಿಮಗೆ ಅರ್ಥವೇ ಆಗದ topic ಗಳನ್ನುRed ಪಟ್ಟಿಯಲ್ಲಿ ಹಾಕಿ, ಸುಮಾರಗಿ ಅರ್ಥವಾಗಿದೆ ಎಂಬ topicಗಳನ್ನು Yellow ಪಟ್ಟಿಯಲ್ಲಿ ಹಾಕಿ, ನನಗೆ ಸಂಪೂರ್ಣವಾಗಿ ಅರ್ಥವಾಗಿದೆ ಎಂಬ topicಗಳನ್ನು Green ಪಟ್ಟಿಯಲ್ಲಿ ಹಾಕಿ.
ನಂತರ ನಿಮ್ಮ ಈ ಪರೀಕ್ಷಾ ಸಿದ್ಡತೆಯ ಉಳಿದ ಸಮಯದ 70% ರಷ್ಟು ಸಮಯವನ್ನು Red ಪಟ್ಟಿಯಲ್ಲಿರುವ Topicಗಳ ಮೇಲೆ ಕೇಂದ್ರೀಕರಿಸಿ ಅಧ್ಯಯನ ನಡೆಸಿ, ಅವುಗಳನ್ನು Yellow ಪಟ್ಟಿಗೆ ತರಲು ಪ್ರಾರ0ಭಿಸಿ.
ಮತ್ತೊಂದು ಮಂತ್ರ ನಿಮಗೆ ತಿಳಿದಿರಲಿ ಅದು Reverse Engineering…
ಅಂದರೆ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ನೋಡಿ ನೀವು ಓದಿರದ ಯಾವ Topicಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗಿದೆ ನೋಡಿ. ಎಲ್ಲಾವನ್ನು ಓದುವ ಬದಲು ಮೊದಲು ಹಿಂದಿನ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಿರುವ ಪ್ರಶ್ನೆಗಳ Topicಗಳನ್ನು ಮೊದಲು ಮುಗಿಸಿ.
ನಿಮಗೆ ಅರಿವಿಲ್ಲದೆ ನೀವು ಮಾಡುವ ತಪ್ಪೊಂದಿದೆ, Be Careful on that . ಅಂದರೆ ಓದುವಾಗ ಎಲ್ಲವೂ ಅರ್ಥವಾಗಿದೆ, ಗೊತ್ತಿದೆ ಎಂದು feel ಆಗುವುದು, ಆದರೆ ಪ್ರಶ್ನೆಪತ್ರಿಕೆ ನೋಡಿದಾಗ ಅದನ್ನು ಹೇಗೆ ಬರೆಯಬೇಕು ಎಂಬುದರ ಬಗೆಗೆ ನಿಮಗೇನೂ ಹೊಳೆಯದಿರುವುದು.
ಇದನ್ನ ನೀವು ಹೇಗೆ ಬಗೆಹರಿಸಿಕೊಳ್ಳಬಹುದು ಗೊತ್ತ..?
ಇದಕ್ಕೆ ನೀವು Feynman ಟೆಕ್ನಿಕ್ ಬಳಸಬಹುದು. ನೀವು ಓದಿಕೊಂಡಿದ್ದನ್ನು ಎಂಟತ್ತು ವರ್ಷದ ಮಗುವಿಗೆ Explain ಮಾಡಿ ಅಥವಾ ಒಂದು ಖಾಲಿ ಚೇರಿನ ಮುಂದೆ ಕುಳಿತು Explain ಮಾಡಿ, ನಿಮಗೆ ನಿರರ್ಗಳವಾಗಿ ಅಂದರೆ ನೀವು ತಡವರಿಸದೆ Explain ಮಾಡಲು ನಿಮಗೆ ಸಾಧ್ಯವಾದರೆ ಆ Topic ನಿಮಗೆ ಸಂಪೂರ್ಣ ಅರ್ಥವಾಗಿದೆ ಎಂದರ್ಥ.
ಅಥವಾ,
ಒಂದು ಪುಟ ಓದಿದ ನಂತರ ಅದನ್ನು ಮುಚ್ಚಿಟ್ಟು ನಿಮಗೆ ಅರ್ಥವಾಗಿರುವುದು ಬರೆಯಿರಿ, ಇದು ನಿಮ್ಮ ಮೆದುಳನ್ನು ಆ ವಿಷಯಗಳನ್ನು ಗ್ರಹಿಸಲು train ಮಾಡುತ್ತದೆ.
ಹಾಗೆಯೇ ನೀವು ಸಮಯವನ್ನು ಕೂಡ ಚತುರತೆಯಿ0ದ ನಿಭಾಯಿಸಬೇಕು. ಅದಕ್ಕೊಂದು ‘The night before and Morning of ruleನ್ನು ಬಳಸಬಹುದು. ಇದು ಹೆಚ್ಚು ಕ್ಲಾರಿಟಿ ತಂದುಕೊಡಲು ಸಹಾಯ ಮಾಡುತ್ತದೆ.
ರಾತ್ರಿ 8 ಗ0ಟೆಯ ನಂತರ ಯಾವುದೇ ಹೊಸ topic ಓದಬೇಡಿ, ಬದಲಿಗೆ ಬೆಳಿಗ್ಗೆಯಿ0ದ ಓದಿದ topic ಗಳ Keywords ಅಥವಾ ಹೈಲೈಟ್ಸ್ ರಿವಿಷನ್ ಮಾಡಿ. ಯಾವ topic ನಿಮಗೆ ಸರಿಯಾಗಿ ಅರ್ಥವಾಗಿಲ್ಲ ಎನ್ನಿಸುತ್ತದೆ, Read that again.
Studying hard or Studying Smart ಈ ಮಂತ್ರಗಳನ್ನು ಮರೆತುಬಿಡಿ. ಕೇವಲ Studying Clear ಎಂಬ ಮಂತ್ರವನ್ನಷ್ಟೆ ನೆನಪಿನ್ನಲ್ಲಿಡಿ. ಟಾಪಿಕ್ ಗಳನ್ನು ಅರ್ಥಮಾಡಿಕೊಳ್ಳದೆ ನೀವು ಮೂವತ್ತಲ್ಲ ಮುನ್ನೂರು ಬಾರಿ ಓದಿದರೂ ಪ್ರಯೋಜನವಿಲ್ಲ. ನಿಮಗೆ Exam ಬಗೆಗೆ confidence ಬರಬೇಕು ಅಂದ್ರೆ ನೀವು topics ನ ಅರ್ಥಮಾಡಿಕೊಳ್ಳಬೇಕು ಆಗ ಮಾತ್ರ ಪ್ರಶ್ನೆಗಳಲ್ಲಿ ಅಡಗಿರುವ trick ನಿಮಗೆ ಅರ್ಥವಾಗುತ್ತದೆ.
‘Don’t forget, Revision is more important than New Study’,
ಪರೀಕ್ಷೆ ಅನ್ನೋ ಆತಂಕ ಶುರುವಾಗೋದೆ ನೀವು ಓದಿದ್ದನ್ನು ಮರೆತು ಹೋಗಿದ್ದೀರಿ ಅನ್ನೋ ಭಾವದಿ0ದ , So Revision is must.
ಬರೆಯದೇ ಓದುವವನ ಬಗೆಗೆ ಕವಿ ಸರ್ವಜ್ಘರು ಹಿ0ದೆಯೇ ಉತ್ತಮವಾದ ವಚನವೊ0ದನ್ನು ಬರೆದಿದ್ದಾರೆ.ಹಾಗೆಯೇ ಬರೆದು ಓದುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ, So practice writing not Just Reading.
ಓದುವುದು ಆ topicsನ ನಿಮಗೆ ಪರಿಚಯ ಮಾಡಿಸುತ್ತೆ ಆದರೆ ಓದಿ ಬರೆಯುವುದು ನಿಮಗೆ ಆ ಟಾಪಿಕ್ ನಲ್ಲಿ ಪರಿಣತಿಯನ್ನು ತಂದುಕೊಡುತ್ತೆ. ಹಾಗಾಗಿ ನೀವು, ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು , Numericalsಗಳಿಗೆ Step by Step ಉತ್ತರಗಳನ್ನು ಬರೆದು ಪ್ರಾಕ್ಟಿಸ್ ಮಾಡಬೇಕು. ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ತೆಗೆದುಕೊಳ್ಳಬೇಕು. ಇದರಿಂದ ನೀವು ಉತ್ತರಿಸುವ ಶೈಲಿ ಮತ್ತು ಸಮಯ ಸರಿಯಾಗಿರುವಂತೆ practice ಆಗುತ್ತದೆ.
ಉತ್ಸಾಹದಿಂದ ಮಾಡುವ ಮತ್ತೊಂದು ತಪ್ಪು ನಿರ್ವಹಿಸಲಾಗದ Timetable ಹಾಕಿಕೊಳ್ಳುವುದು. ನೀವು Simple ಆದ Realistic plan ಮಾಡಬೇಕು ಮತ್ತು ಆ plan ಪ್ರಕಾರ ನಡೆದುಕೊಳ್ಳಬೇಕು.
ಒ0ದು ನಿರ್ದಿಷ್ಟ ಸಮಯ ಮತ್ತು ಅವಧಿಯವರೆಗೂ ಪ್ರತಿದಿನ ಅಧ್ಯಯನ ಮಾಡಿ. ಪ್ರತಿದಿನವೂ ರಿವಿಷನ್ ಮಾಡಿ. ನಿಮ್ಮ Study plan ನಲ್ಲಿ writing ಗೆ ಆಧ್ಯತೆಯಿರಲಿ ಒಂದೇ subject ಮೇಲೆ ಅಧ್ಯಯನ ಮಾಡಿ ಬೇರೊಂದು subject ನೆಗ್ಲೆಕ್ಟ್ ಮಾಡಬೇಡಿ.
Stop Comparing, Start improving…
ಪ್ರತಿಯೊಬ್ಬರ ವಯಕ್ತಿಕ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. So, ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಇತರರೊಂದಿಗೆ ಹೋಲಿಕೆ ಮಾಡುವುದು ಮತ್ತು ಮಾಡಿಕೊಳ್ಳುವುದನ್ನು ಬಿಡಿ. Compare ಮಾಡಿವುದಕ್ಕಿಂತಲೂ ತಮ್ಮನ್ನು ಮತ್ತಷ್ಟು improve ಮಾಡಿಕೊಳ್ಳುವುದು ಹೆಮ್ಮೆ ಮತ್ತು confidence ತರುತ್ತದೆ. Focus on improving..
ಪೋಷಕರಿಗೆ ಕಿವಿ ಮಾತು – Reduce Pressure Increase Support
ಪ್ರಿಯ ಪೋಷಕರೆ, ಬೇರೆ ಮಕ್ಕಳ ವಿಚಾರ ಬಿಡಿ ನಿಮ್ಮ ಮಕ್ಕಳೊಂದಿಗಿನ ಹೊಲಿಕೆ ಮರೆತುಬಿಡಿ. ನಿಮ್ಮ ಮಗುವಿನ strength ಏನು? ಹುರಿದುಂಬಿಸಿ, ಅವರ weakness ಏನು? pressure ಹಾಕುವ ಬದಲು improve ಮಾಡಿಕೊಳ್ಳಲು ಹುರಿದುಂಬಿಸಿ. ನೆನಪಿರಲಿ ನಿಮ್ಮ ಪ್ರೋತ್ಸಾಹವೇ ಅವರ ಉತ್ಸಾಹ.
ಪ್ರಿಯ ವಿದ್ಯಾರ್ಥಿ ಸ್ನೇಹಿತರೇ,
ಪರೀಕ್ಷೆಗಳು ನೀವೆಷ್ಟು ಬುದ್ಡಿವಂತರು ಅನ್ನೋದನ್ನ ಪರೀಕ್ಷೆಮಾಡೊಲ್ಲ, ಭಯಬೇಡ, ಅವುಗಳು ಟೆಸ್ಟ್ ಮಾಡೋದು- ನಿಮ್ಮ ಸಿದ್ದತೆಯನ್ನ, ಪರೀಕ್ಷೆಗಳೆಡೆಗೆ ನಿಮಗಿರುವ ಬದ್ಧತೆಯನ್ನ, ನೀವು ಹೇಗೆ ಉತ್ತರಿಸಬಲ್ಲಿರಿ ಎ0ಬ ಕೌಶಲ್ಯವನ್ನು ಹಾಗು ನಿಮಗಿರುವ ಅಧ್ಯಯನದೆಡಗಿನ ಶ್ರದ್ಧೆಯನ್ನ. So, ಈ ಪರೀಕ್ಷೆ ಎಂಬ ಅವಕಾಶದಲ್ಲಿ ನಿಮ್ಮ ಸಿದ್ಧತೆ, ಬದ್ಧತೆ, ಕೌಶಲ್ಯ ಮತ್ತು ಶ್ರದ್ಧೆಗಳನ್ನು ತೋರಿಸಿ.
ಪರೀಕ್ಷೆಯ ಭಯ ನಿಮ್ಮನ್ನು ಬಾವಿಯೊಳಗೆ ನೂಕಬಾರದು ಬದಲಿಗೆ ನಿಮ್ಮನ್ನು ಸಮರ್ಥ ಸಿದ್ಧತೆಯೆಡೆಗೆ ಪ್ರೇರೇಪಿಸಬೇಕು. ನಿಮ್ಮ ಸಿದ್ಧತೆ, ಶ್ರದ್ಧೆ ಮತ್ತು ಅಧ್ಯಯನ ನಿರಂತರವಾಗಿರಲಿ.
ಕಾಳಜಿಯಿಂದ –ಕೃಷ್ಣ ನಂದನ
WhatsApp us